ವಿಷಯಕ್ಕೆ ಹೋಗಿ
ಕೆನೋಪಿ ವಾಕ್ ನಿರ್ಮಾಣಕ್ಕೆ ಅನುದಾನವಿದ್ದರೂ ಮೀನಮೇಷ
ಕೆನೋಪಿ ವಾಕ್ ನಿರ್ಮಾಣಕ್ಕೆ ಅನುದಾನವಿದ್ದರೂ ಮೀನಮೇಷ
ಸಂಡೂರು ಪ್ರವಾಸೋದ್ಯಮಕ್ಕೆ ಬಲ ತುಂಬುವ ಯೋಜನೆ, 73.2 ಕೋಟಿ ವೆಚ್ಚ
ಸೀ ಸಂಡೂರು ಇನ್ ಸೆಪ್ಟೆಂಬರ್ ವ್ಯೂ ಪಾಯಿಂಟ್ ಬಳಿ ನಿರ್ಮಿಸಲು ಉದ್ದೇಶಿಸಿರುವ ಕೆನೋಪಿ ವಾಕ್ ಕಾಂಕ್ರೀಟ್ ತೂಗು ಸೇಡುವ ಮಾದರಿ ಚಿತ್ರ, ಕ್ಯಾನೋಪಿ ವಾಕ್ ನಿರ್ಮಾಣಕ್ಕೆ ಯೋಚಿಸಿದರು. ಜಿಲ್ಲಾಡಳಿತವೂ ಸ್ಪಂದಿಸಿ ಡಿಎಂಎಫ್‌ನಲ್ಲಿ 13.2 ಕೋಟಿ
ತಾಲೂಕು ಸಂಡೂರು ನೆನಪಾಗುವುದು. ಧೂಳು, ಕೆಂಪು ಮಣ್ಣು, ಇದರ ಮಧ್ಯೆಯೂ ಪ್ರವಾಸೋದ್ಯಮಕ್ಕೆ ಮೆರಗು ತು0ಬಲು ಅರಣ್ಯ ಇಲಾಖೆ 'ಕೆನೋಪಿ ವಾಕ್' ಎಂಬ ವಿಶಿಷ್ಟ ಯೋಜನೆ ತರಲು ಮುಂದಾಗಿದೆ.
ಇಲ್ಲಿನ ಸ್ವಾಮಿಮಲೈ: ಬ್ಲಾಕ್ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ 2.3.2 ಕೋಟಿ ವೆಚ್ಚದಲ್ಲಿ ಅರಣ್ಯ ಮೇಲಾವರಣ ನಡೆಗೆ ವಿಶೇಷ ಸೇತುವೆ ನಿರ್ಮಿಸಲು ಉದ್ದೇಶಿಸಿದೆ. ಆದರೆ ಈ ಯೋಜನೆ ಜಾರಿಗೆ ಕಾಲಕೂಡಿ ಬರುತ್ತಿಲ್ಲ. ಅನುದಾನವಿದ್ದರೂ ಅನುಷ್ಠಾನಕ್ಕೆ ಅಧಿಕಾರಿಗಳುಏಕೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಎ೦ಬುದೇ ಯಕ್ಷ ಪ್ರಶ್ನೆಯಾಗಿದೆ.
ಸಂಡೂರಿನ ಕೂಡ್ಲಿಗಿ ರಸ್ತೆಯ ಸ್ವಾಮಿಮಲೈ ಬ್ಲಾಕ್‌ನ 3993 ಹೆಕ್ಟೇರ್ ಪ್ರದೇಶವು ಕಾಯ್ದಿಟ್ಟ ಅರಣ್ಯವಾಗಿದೆ. ಹಿ೦ದೆ ಮಹಾತ್ಮ ಗಾಂಧೀಜಿ ಅವರು ದಕ್ಷಿಣ ಭಾರತದ
ಪ್ರವಾಸದಲ್ಲಿದ್ದಾಗ ಸಂಡೂರಿಗೂ ಬಂದಿದ್ದರು. ಸಂದರ್ಭದಲ್ಲಿ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತು 'ಸೀ ಸಂಡೂರು ಇನ್ ಸೆಪ್ಟೆಂಬರ್' ಎಂಬ ಮಾತನ್ನು ಹೇಳಿದ್ದರು ಎನ್ನಲಾಗುತ್ತಿದೆ. ದ್ಯೋತಕವಾಗಿ ಗಂಡಿ ನರಸಿಂಹಸ್ವಾಮಿ ಹಿಂಭಾಗದ ವ್ಯೂ ಪಾಯಿಂಟ್‌ಗೆ ಸೀ ಸಂಡೂರು ಇನ್ ಸೆಪ್ಟೆಂಬರ್ ಎಂಬ ಹೆಸರಿಡಲಾಗಿದೆ. ಅಲ್ಲಿ ಒಂದು ಗಾಂಧಿ ಪ್ರತಿಮೆ ಸ್ಥಾಪಿಸಲಾಗಿದೆ. ಇಲ್ಲಿನ ಪ್ರತಿಮೆಯ ಪಕ್ಕದಿಂದ ನಾರಿಹಳ್ಳ ದಾಟಿ ಔಷಧಿ ಸಸ್ಯವನದ ತನಕ ಇಳಿಜಾರಿನಲ್ಲಿ ಮರಗಳ ಮೇಲೆ ತೂಗು ಸೇತುವ ರೂಪದ ಕಾಂಕ್ರೀಟ್ ಕಾಲುಹಾದಿ ನಿರ್ಮಿಸಲು ಉದ್ದೇಶಿಸಲಾಗಿದೆ. ಸುಮಾರು 450 ಮೀಟರ್ ಉದ್ದದ ಸೇತುವೆ.
ಪ್ರವಾಸಿಗರಿಗೆ ಮರಗಳ ಮೇಲಿಂದ ಕಾಲ್ನಡಿಗೆಯಲ್ಲಿ ಪ್ರಕೃತಿ ಸವಿಯುವ ಅವಕಾಶ ದೊರೆಯಲಿದೆ, ದಾಂಡೇಲಿ ಹೊರತುಪಡಿಸಿ ಉತ್ತರ ಕರ್ನಾಟಕದಲ್ಲೇ ಅತ್ಯಂತ ವಿಶಿಷ್ಟ ಹಾಗೂ ಏಕೈಕ ಕ್ಯಾನೋಪಿ ಇದಾಗಲಿದ್ದು, ನಿರ್ಮಾಣ ಕಾಮಗಾರಿ ಆರಂಭಕ್ಕೆ ಕಾಲ ಕೂಡಿ ಬರುತ್ತಿಲ್ಲ.
ಕೆನೋಪಿ ವಾಕ್ ಉತ್ತರ ಕರ್ನಾಟಕದಲ್ಲಿ ಇದೇ ಮೊದಲನೆಯದಾಗಲಿದೆ. ಡಿಪಿಆರ್್ರ ಮಾಡುವ ಏಜೆನ್ಸಿ ಬದಲಾವಣೆಯಾಗಿ ಅನುಷ್ಠಾನ ವಿಳಂಬವಾಗಿದೆ. ಇದಕ್ಕಾಗಿ *1.6 ಕೋಟಿ ಅನುದಾನವೂ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಟೆಂಡರ್ ಕರೆದು 4 ತಿಂಗಳಲ್ಲಿ ಕೆಲಸ ಮುಗಿಸುತ್ತೇವೆ. ಉದ್ದೇಶಿತ ಜಾಗದಲ್ಲಿ ಇಳಿಜಾರು ಇರುವುದರಿಂದ ದೂರದೃಷ್ಟಿ ವಹಿಸಿ ಸರಿಯಾದ ಏಜೆನ್ಸಿಗೆ ಕೆಲಸ ವಹಿಸಲಿದ್ದೇವೆ. ಮುಂದಿನ ಮಳೆಗಾಲಕ್ಕೆ ಇದು ಸಂಪೂರ್ಣ ಸಿದ್ಧವಾಗಿರಲಿದೆ.
• ಸಂದೀಪ್ ಹಿಂದೂರಾವ್ ಸೂರ್ಯವಂಶಿ
ಉಪ ಅರಣ್ಯ ಸಂರಕ್ಷಣಾಧಿಕಾರಿ
ಅನುದಾನವಿದ್ದರೂ ವಿಳಂಬ: ಶಾಸಕ ಈ ತುಕಾರಾಮ್ ಮೊದಲಿಗೆ 21 ಕೋಟಿ ಅನುದಾನವನ್ನು ಜಿಲ್ಲಾ ಖನಿಜ ನಿಧಿಯಡಿಈಸ್ಥಳ ಅಭಿವೃದ್ಧಿಪಡಿಸಲುನಿಗದಿಪಡಿಸಿದ್ದರು. ಆನಂತರ ಅಧಿಕಾರಿಗಳು ಮತ್ತಷ್ಟು ಮುತುವರ್ಜಿ ವಹಿಸಿ ಅನುದಾನ ನೀಡುತ್ತಿದೆ. 21.6 ಕೋಟಿ ವೆಚ್ಚದಲ್ಲಿ ಕ್ಯಾನೋಪಿ ವಾಕ್ ಹಾಗೂ 21.6 ಕೋಟಿಯಲ್ಲಿ ಎಕ್ ಪಿರಿಯನ್ಸ್ ಸೆಂಟರ್ ನಿರ್ಮಿಸಿ ಅಲ್ಲಿ ಸ್ವಾಗತ ಕೊಠಡಿ, ರೆಸ್ಟ್‌ರೂಂ, ಟಿಕೆಟ್ ಕೌಂಟರ್ ಹಾಗೂ ಮಾಹಿತಿ ಕೇಂದ್ರ ನಿರ್ಮಿಸಲು ಪ್ಲಾನ್ ಸಿದ್ದಗೊಂಡಿದೆ. ಈ ಮುಂಚೆ ಮಾರ್ಸ್ ಎಂಬ ಕನ್ನನ್ಸಿಯವರಿಗೆ ಡಿವಿಆರ್ ಮಾಡಲು ವಹಿಸಲಾಗಿದ್ದು, ಅವರಿಂದ ಪೂರಕ ಸ್ಪಂದನೆ ಸಿಗದೆ ಕಾಮಗಾರಿ ವಿಳಂಬಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇದೀಗ ಯಾಮ್,ಡಿಸೈನರ್ಸ್ ಎಂಬ ಕಂಪನಿಯು ತಾಂತ್ರಿಕ ಸೇವೆನೀಡಿದ್ದು, ಟೆಂಡರ್ ಕರೆದು ಜನವರಿಯಲ್ಲಿ ಕೆಲಸ ಶುರುವಾದರೆ ಮಳೆಗಾಲಕ್ಕೆಲ್ಲ ಪ್ರವಾಸಿಗರಿಗೆ ಕ್ಯಾನೋಪಿ ವಾಕ್ ಲಭ್ಯವಾಗಲಿದೆ. ಇನ್ನಾದರೂ ಅಧಿಕಾರಿಗಳು ವಿಳಂಬ ಧೋರಣೆ ತೋರದೆ ಯೋಜನೆ ಚುರುಕುಗೊಳಿಸಬೇಕು. ಆ ಮೂಲಕ ಪ್ರವಾಸಿಗರ ಬಹು ನಿರೀಕ್ಷೆಯ ಕ್ಯಾನೋಪಿ ವಾಕ್ ವಿಶೇಷ ಸೇತುವೆ ನಿರ್ಮಿಸಿ ಸಾರ್ವಜನಿಕರ ಉಪಯೋಗಕ್ಕೆ ಅರ್ಪಿಸಬೇಕಿದೆ. ಹಾಗಾದಲ್ಲಿ ಸಂಡೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ