ಸಂಡೂರು ಸರಕಾರಿ ಆಸ್ಪತ್ರೆಯಲ್ಲಿ ಲಂಚ?
ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಂಚಗುಳಿತನ ಮನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಪ್ರತಿ ಚಿಕಿತ್ಸೆ ಹೆರಿಗೆ, ಶಸ್ತ್ರ ಚಿಕಿತ್ಸೆ, ಶಸ್ತ್ರ ಚಿಕಿತ್ಸೆಯ ಹೊಲಿಗೆ ತೆಗೆಯಲು ಲಂಚ ನೀಡಬೇಕಾಗುತ್ತದೆ ಎಂಬ ಕುರಿತ ವಿಡಿಯೊವೊಂದು ಸಾಮಾಜಿಕ ಹರಿದಾಡುತ್ತಿದೆ. ತಾಣದಲ್ಲಿ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆ ಯಲ್ಲಿನ ನರ್ಸ್ ಹಾಗೂ ಸಿಬ್ಬಂದಿಯೊಬ್ಬರು ರೋಗಿಗಳ ಸಂಬಂಧಿಕರಿಂದ ಲಂಚ ಪಡೆಯುತ್ತಿದ್ದಾರೆ ಎಂಬ ವಿಡಿಯೊ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಹೆರಿಗೆ ಮಾಡಿಸಿದರೆ ಮಗು ಗಂಡಾದರೆ ಒಂದು ರೇಟು, ಹೆಣ್ಣಾದರೆ ಮತ್ತೊಂದು ರೇಟು, ಸಿಜರಿನ್ ಆದರೆ ಇನ್ನೊಂದು ರೇಟು, ಆಪ ರೇಷನ್‌ನ ಹೊಲಿಗೆ ತೆಗೆಯಲು ಹಣ ಕೊಡಬೇಕು. ಚಿಕಿತ್ಸೆ ಮುಗಿದು ಆಸ್ಪತ್ರೆಯಿಂದ ಹೊರಗೆ ಹೋಗುವ ರೋಗಿಗಳನ್ನು ವಿಚಾರಿ ಸುವ ನೆಪದಲ್ಲಿ ಹಣ ಪೀಕುತ್ತಾರೆ ಎಂಬುದು ಸೇರಿದಂತೆ ಆಸ್ಪತ್ರೆಯಲ್ಲಿನ ಲಂಚಾವತಾರದ ಕುರಿತು ವಿಡಿಯೊದಲ್ಲಿ ಮೂಡಿ ಬಂದಿವೆ. ಈ ಹಿಂದೆ ಸರಕಾರಿ ಆಸ್ಪತ್ರೆ ಸಿಬ್ಬಂದಿಯೊಬ್ಬರು ಹಾಗೂ ಕೆಲ ಸಿಬ್ಬಂದಿ ಲಂಚ ಪಡೆಯುತ್ತಿದ್ದಾರೆ. ಎಂಬ ಆರೋಪದ ಮೇರೆಗೆ ವರ್ಗಾವಣೆಯ ಶಿಕ್ಷೆಗೆ ಒಳಗಾಗಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಲಂಚಾವತಾರದ ವಿಡಿ ಯೊ ಹರಿದಾಡುತ್ತಿದೆ. ಈ ಕುರಿತು ಆರೋಗ್ಯ ನಿಂತೇ ಇಂಜೆಕ್ಷನ್ ಪಡೆಯಿರಿ ಸಂಡೂರಿನ ಸರಕಾರಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ ರೋಗಿಗಳು, ವೃದ್ದರೂ ನಿಂತು ಕೊಂಡೇ ಇಂಜೆಕ್ಷನ್ ಪಡೆಯಬೇಕು. ಇಂಜೆ ಕ್ಷನ್ ...