ಸಂಡೂರು ಸರಕಾರಿ ಆಸ್ಪತ್ರೆಯಲ್ಲಿ ಲಂಚ?
ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಂಚಗುಳಿತನ ಮನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಪ್ರತಿ ಚಿಕಿತ್ಸೆ ಹೆರಿಗೆ, ಶಸ್ತ್ರ ಚಿಕಿತ್ಸೆ, ಶಸ್ತ್ರ ಚಿಕಿತ್ಸೆಯ ಹೊಲಿಗೆ ತೆಗೆಯಲು ಲಂಚ ನೀಡಬೇಕಾಗುತ್ತದೆ ಎಂಬ ಕುರಿತ ವಿಡಿಯೊವೊಂದು ಸಾಮಾಜಿಕ ಹರಿದಾಡುತ್ತಿದೆ. ತಾಣದಲ್ಲಿ
ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆ ಯಲ್ಲಿನ ನರ್ಸ್ ಹಾಗೂ ಸಿಬ್ಬಂದಿಯೊಬ್ಬರು ರೋಗಿಗಳ ಸಂಬಂಧಿಕರಿಂದ ಲಂಚ ಪಡೆಯುತ್ತಿದ್ದಾರೆ ಎಂಬ ವಿಡಿಯೊ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಹೆರಿಗೆ ಮಾಡಿಸಿದರೆ ಮಗು ಗಂಡಾದರೆ ಒಂದು ರೇಟು, ಹೆಣ್ಣಾದರೆ ಮತ್ತೊಂದು ರೇಟು, ಸಿಜರಿನ್ ಆದರೆ ಇನ್ನೊಂದು ರೇಟು, ಆಪ ರೇಷನ್‌ನ ಹೊಲಿಗೆ ತೆಗೆಯಲು ಹಣ ಕೊಡಬೇಕು. ಚಿಕಿತ್ಸೆ ಮುಗಿದು ಆಸ್ಪತ್ರೆಯಿಂದ ಹೊರಗೆ ಹೋಗುವ ರೋಗಿಗಳನ್ನು ವಿಚಾರಿ ಸುವ ನೆಪದಲ್ಲಿ ಹಣ ಪೀಕುತ್ತಾರೆ ಎಂಬುದು ಸೇರಿದಂತೆ ಆಸ್ಪತ್ರೆಯಲ್ಲಿನ ಲಂಚಾವತಾರದ ಕುರಿತು ವಿಡಿಯೊದಲ್ಲಿ ಮೂಡಿ ಬಂದಿವೆ. ಈ ಹಿಂದೆ ಸರಕಾರಿ ಆಸ್ಪತ್ರೆ ಸಿಬ್ಬಂದಿಯೊಬ್ಬರು ಹಾಗೂ ಕೆಲ ಸಿಬ್ಬಂದಿ ಲಂಚ ಪಡೆಯುತ್ತಿದ್ದಾರೆ. ಎಂಬ ಆರೋಪದ ಮೇರೆಗೆ ವರ್ಗಾವಣೆಯ ಶಿಕ್ಷೆಗೆ ಒಳಗಾಗಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಲಂಚಾವತಾರದ ವಿಡಿ ಯೊ ಹರಿದಾಡುತ್ತಿದೆ. ಈ ಕುರಿತು ಆರೋಗ್ಯ
ನಿಂತೇ ಇಂಜೆಕ್ಷನ್ ಪಡೆಯಿರಿ
ಸಂಡೂರಿನ ಸರಕಾರಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ ರೋಗಿಗಳು, ವೃದ್ದರೂ ನಿಂತು ಕೊಂಡೇ ಇಂಜೆಕ್ಷನ್ ಪಡೆಯಬೇಕು. ಇಂಜೆ ಕ್ಷನ್ ರೂಮಿನಲ್ಲಿನ ಬೆಡ್ ಮೇಲೆ ಮಲಗಿಸಿ ರೋಗಿಗಳಿಗೆ ಇಂಜೆಕ್ಷನ್ ಕೊಡ ಬೇಕು ಎಂಬ ಕನಿಷ್ಟ ಸೌಜನ್ಯ ಆಸ್ಪತ್ರೆಯ ಸಿಬ್ಬಂದಿಯಲ್ಲಿ ಕಾಣದಾಗಿದೆ. ನಿಂತುಕೊಂಡು ಇಂಜೆಕ್ಷನ್ ಪಡೆದ ಹಲವರಿಗೆ ಗಡ್ಡೆಗಳಾಗಿವೆ. ಬೆಡ್ ಮೇಲೆ ಮಲಗಿ ಇಂಜೆಕ್ಷನ್ ಪಡೆ ಯುತ್ತೇವೆ ಎಂದವರಿಗೆ ಇಬ್ಬಂದಿ ಮೂದಲಿಸುತ್ತಾರೆ. ಇನ್ನೂ ದುರಂತವೆಂದರೆ ಬೆಡ್‌ಗಳ ಮೇಲಿನ ಹೊದಿಕೆಗಳು ಕಲೆಯಾಗಿ ಗಬ್ಬೆದ್ದು ಹೋಗಿವೆ.
ಸರಕಾರಿ ಆಸ್ಪತ್ರೆಯಲ್ಲಿನ ನರ್ಸ್‌ಗಳು, ಸಿಬ್ಬಂದಿ ಲಂಚ ಪಡೆಯುತ್ತಿದ್ದಾರೆ ಎಂಬ ವಿಡಿಯೊದ ಬಗ್ಗೆ ನನಗೆ ಗೊತ್ತಿಲ್ಲ, ಆಸತ್ರೆಯಲ್ಲಿನ ವೈದ್ಯ ರಾರೂ ರೋಗಿಗಳಿಂದ ಹಣ ಪಡೆಯುವು ದಿಲ್ಲ. ಆದರೆ ಸಿಬ್ಬಂದಿ ಲಂಚ ಪಡೆದಿದ್ದಾರೆ ಎಂಬ ದೂರಿನ ಕುರಿತು ಹಿರಿಯ ಅಧಿ ಕಾರಿಗಳು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ
ಕೈಗೊಳ್ಳಬಹುದು.- ಡಾ.ರಾಮಶೆಟ್ಟಿ ಆಡಳಿತ ವೈದ್ಯಾಧಿಕಾರಿ, ಸರಕಾರಿ ಸಾರ್ವಜನಿಕ ಆಸ್ಪತ್ರೆ, ಸಂಡೂರು
ಇಲಾಖೆಯ ಹಿರಿಯ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ